ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for ಸೆಪ್ಟೆಂಬರ್, 2006

ಮೌಸ್ ಕ್ಲಿಕ್ ಮಾಡಿದರೆ ಅಪರಾಧಕ್ಕೆ ಶಿಕ್ಷೆ ಘೋಷಣೆ

ಎಲ್ಲಾ ಕ್ಷೇತ್ರಕ್ಕೂ ಕಂಪ್ಯೂಟರ್ ತಂತ್ರಜ್ಞಾನ ಕಾಲಿರಿಸತೊಡಗಿದೆ. ಇದಕ್ಕೆ ಹೊಸ ಸೇರ್ಪಡೆ ಕಾನೂನು ಅಥವಾ ನ್ಯಾಯದಾನ ಕ್ಷೇತ್ರ. ಕಂಪ್ಯೂಟರೇ ಅಪರಾಧಿಗೆ ಶಿಕ್ಷೆ ನಿರ್ಧರಿಸಿದರೆ ಹೇಗಿರುತ್ತದೆ?

1500ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳಲ್ಲಿ ಖೈದಿಗಳಿಗೆ ನೀಡಬಹುದಾದ ಶಿಕ್ಷೆ ಘೋಷಿಸುವ ಸಾಫ್ಟ್‌ವೇರ್ ಒಂದನ್ನು ಚೀನಾದಲ್ಲಿ ನ್ಯಾಯಾಲಯವೊಂದು ಬಳಸುವ ಮೂಲಕ ಈ ಪ್ರಶ್ನೆಗೆ ಉತ್ತರ ದೊರಕಿದೆ.

ಶಾಂಡಾಂಗ್‌ನ ಪೂರ್ವ ಕರಾವಳಿ ಪ್ರಾಂತ್ಯದ ಪಟ್ಟಣವಾಗಿರುವ ಜಿಬೋ ಎಂಬಲ್ಲಿನ ನ್ಯಾಯಾಲಯದಲ್ಲಿ ಕಳೆದ ಎರಡು ವರ್ಷಗಳಿಂದ ಈ ಸಾಫ್ಟ್‌ವೇರ್‌ನ ಪರೀಕ್ಷೆ ನಡೆಸಲಾಗುತ್ತಿದೆ.

ಈ ಸಾಫ್ಟ್‌ವೇರು ದರೋಡೆ, ಅತ್ಯಾಚಾರ, ಕೊಲೆ ಮತ್ತು ಭದ್ರತಾ ಸಂಬಂಧಿ ಅಪರಾಧಗಳೇ ಮುಂತಾದ ವೈವಿಧ್ಯಮಯ ಅಪರಾಧಗಳ ಕುರಿತು ತೀರ್ಪು ನೀಡುತ್ತದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಈ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದವರು ಕ್ವಿನ್ ಯೆ ಎಂಬ ತಂತ್ರಜ್ಞ.